ಆವಯ್ಯ, ಅದೇ ವೆಂಕಣ್ಣಯ್ಯ ಅಲಿಯಾಸ್ ವೆಂಕಟಾಚಲ ಬಂಗಾರದಂಗ್ ಇರೋ ಹೊತ್ಗೆ ಬೆಂಗ್ಳೂರ್‌ನಲ್ಲಿರೋ ಪೋಲೀಸ್ರೂ ಬಾಯ್-ಬಾಯ್ ಬಿಡೋ ಹಾಂಗಿತ್ತು, ಈ ಕುಸಾ ಸರ್ಕಾರದೋರು ಆವಪ್ಪನ್ನ ಸ್ವಲ್ಪ ದಿವ್ಸ ಇರೂ ಅಂತ್ಲೂ ಅನ್ಲಿಲ್ಲವಂತೆ! ಅಕಟಕಟಾ, ವೆಂಕಣ್ಣ ಅಚಲರಾಗಿ ಇರೋ ಹಾಗಿದ್ದಕ್ಕೆ ಜನಕ್ಕೆ ಸ್ವಲ್ಪನಾದ್ರೂ ನಡುಕ ಅನ್ನೊದ್ ಇತ್ತು, ಇನ್ ಮ್ಯಾಗೆ ಈ ಹೆಗ್ಡೆ ಮನ್ಷ ಏನ್ ಮಾಡ್ತಾರೋ ಯಾರಿಗ್ ಗೂತ್ತು?
ಕುಸಾ ಸರ್ಕಾರ ಲೋಕಾಯುಕ್ತ್‌ರಿಗೆ ಬೋ ಅಧಿಕಾರ ಕೊಟ್ಟು, ಒಂಥರಾ ಕೈ ಕೊಟ್ಟು ಕೋಳ ತೊಡಿಸಿಕೊಳ್ಳೋ ಹಂಗೆ ಕಾಣೋ ಮಾತಾಡುತ್ತಂತೆ! ಅದೂ ಅಲ್ದೇ ಎಲ್ಲರ ಮನೆ ಆಸ್ತೀನೂ, ಬ್ಯಾಂಕ್ ಬ್ಯಾಲೆನ್ಸೂವೇ ತೆಗ್ದು ಕಂಪ್ಯೂಟರ್‌ನಾಗೆ ಏರಿಸ್ತಾರಂತೆ ನಿಜವೇ? ನಂಬೋಕೇ ಆಗೋದಿಲ್ಲ! ಯಾರಿಗ್ಗೊತ್ತು ಶಿವಾ, ಎಲ್ರೂ ತಮ್-ತಮ್ ಆಸ್ತೀ ಅಂತಸ್ತಿನ ವಿವರ ಕೊಟ್ಟ್ ಕೊಟ್ಟೇ ಈಗ ಎಲೆಕ್ಷನ್‌ನ್ಯಾಗೆ ಗೆದ್ ಬರಾಕಿಲ್ವಾ, ಲಂಚಾ ತಗಳಾಕಿಲ್ವಾ - ಅದರಿಂದೇನಾತೂ ಅಂತೀನಿ. ಹಂಗೇ, ಈಗ ಕಂಪ್ಯೂಟರ್ ಪರದೇನ್ಯಾಗೆ ತೋರಿಸಿ ಬಿಟ್ರೆ, ಇವರ್ ಮನೇಲಿರೋ ಚಿನ್ನದ ಗಟ್ಟಿ, ಕರಿ ಲಕ್ಷ್ಮೀನೆಲ್ಲ ಎಣಿಸಿಕಂಬರೊರ್ಯಾರು ಅಂತ?
ಕಾಲ ಅಂತೂ ಕೆಟ್ಟೋಗತೆ, ಕೊನೇ ಪಕ್ಷ ಈ ಹೆಗ್ಡೆ ಮನ್ಷಾ ಕನ್ನಡ್ ಜನ ನೆನಪಿಸಿಕೊಳ್ಳೋ ಹಂಗೆ ಏನಾರೂ ಮಾಡಿದ್ರೆ ಬೋ ಚೆನ್ನಾಗಿತ್ತು ಸ್ವಾಮಿ, ಏನಂತೀರಿ?
# posted by Satish : 3:42 pm