'ಥೂ ನಿಮ್ಮವ್ನ, ಅತ್ಲಾಗ್ ಇಪ್ಪತ್ತು ತಿಂಗ್ಳು ತೂಗಡಿಸಿಕೊಂಡ್ ಕಳದ್ದಿದ್ದಾತು, ಈಗ ಕುಸಾ ಮ್ಯಾಲ್ ಯಾಕಪ್ಪಾ ಬೆಟ್ ಮಾಡಿ ತೋರುಸ್ತಿ ಧರಮಣ್ಣ? ಹುಜೂರ್ ತಮ್ಮ ಆಡಳಿತದಾಗ ಏನ್ ಮಾಡದಿದ್ದ್ ಮ್ಯಾಗ ಯಾಕಪ್ಪಾ ಮಂದಿ ಉಸಾಬರಿ...' ಎಂದು ಧರಮ್ ಸಿಂಗರನ್ನು ಯಾರೋ ಕೇಳುತ್ತಿದ್ದ ಹಾಗನ್ನಿಸಿತು. ವಿಮಾನದಾಗೋ ಹೆಲಿಕಾಪ್ಟರ್‌ನ್ಯಾಗೋ ಕುತಗೊಂಡು ನೀರು ಹೊಕ್ಕ ಗ್ರಾಮಗಳ್ನ ನೋಡ್ತಾರಪಾ, ಅದು ಎಲ್ರೂ ಮಾಡೋ ಕೆಲ್ಸಾ, ಅಂತಾದ್ರಾಗ ಅವ್ರು ಬಿಟ್ಟು, ಇವ್ರು ಬಿಟ್ ಕುಸಾ ಮ್ಯಾಗ ಯಾಕಪ್ಪ ಕೈ ತೋರಿಸ್ ಬೇಕಿತ್ತು? ತಮ್ಮ ಅಧಿಕಾರ ಇದ್ದಾಗ ಗುಲ್ಬರ್ಗದ ಮುಖ ನೋಡೋಕೇ ಎಷ್ಟೋ ತಿಂಗಳು ತಗೊಂಡ ಧರಮಣ್ಣ ಈ ಮಾತು ಹೇಳಿದ್ರೆ ಯಾವ ದೇವ ಮೆಚ್ತಾನ್ ಶಿವ, ಆ ಜೀವರಿಗಿ ದೇವ್ರಿಗೊಂದೇ ಗೂತ್ತು.
ಕುಸಾ ಹಣೀ ಮ್ಯಾಗ ಚೋಲೋ ಅದೃಷ್ಟ ಬರದತಿ, ಅತ್ಲಾಗ್ ಮಾಡಿಕ್ಯಳ್ಳಿ ಬಿಡ್ರಿ ಪ್ರವಾಸನ, ಸರಕಾರ ದುಡ್ಡೂ ಅಂದ್ರೆ ಏನ್ ಕಮ್ಮೀ ಐತೇನು? ಸಾಹೇಬ್ರು ಆರು ತಿಂಗಳು ಅಧಿಕಾರ್‍ದಾಗಿದ್ದು ಒಂದು ನೆರೆ ಪೀಡಿತ ಪ್ರದೇಶಾನೂ ಸಂದರ್ಶಿಸಲಿಲ್ಲಾ ಅಂದ್ರ ಒಂದು ರೀತಿ ಮುಖದ್ ಮ್ಯಾಗ್ ಕಪ್ಪ್ ಚುಕ್ಕಿ ಇದ್ದಂಗಾ ನೋಡಪಾ. ಇವರೆಲ್ಲ ಮ್ಯಾಲಿನಿಂದ ಕಣ್ಣೀರು ಸುರುಸ್ಲಿ, ಅಲ್ಲಿ ಮಳ್ಯಾಗ ನೆಂದ ಜನ ಇಂಥೋರ್ ಕಣ್ಣಿಂದ ಮತ್ತಷ್ಟು ತೋಯ್ದು ಹೋಕ್ತಾರ, ಅಷ್ಟೇ ತಾನೆ, ಆಗಲಿ ಬಿಡು. ಕರ್ನಾಟಕದ ಗಂಡುಗಲಿ ಜನರಿಗೆ ಎಂತೆಂಥಾ ಮಳೀನಾ ಸಹಿಸ್ಕ್ಯಣಕಾಗ್‌ತತಿ, ಇನ್ನು ಈ ರಾಜ್‌ರಾರಣಿಗಳು ಒಂದೇ ಕಣ್ಣಲ್ ಸುರುಸೋ ನೀರು ತಡಿಯೋಕ್ ಆಗಲ್ಲ ಅಂದ್ರೆ ಹೆಂಗ?
ಕುಸಾ ಸಾಹೇಬ್ರ, ಅತ್ಲಾಗ ಗುಲಬರ್ಗಾದಿಂದ ಬರೋ ಮುಂದ ಸಂಡೂರ್‌ನೂ ಒಂದಿಷ್ಟು ಭೇಟ್ಟಿ ಕೊಟ್ ಬರಬೇಕಿತ್ರೀ. ಗಣಿ ಹೆಂಗ ತೆಗದಾರ, ಬಿಟ್ಟಾರ ಅಂತ ಇಂಟರ್‌ನೇಟ್ ನ್ಯಾಗ
ಎಲ್ಲೋ ಹ್ಯಾಕಾರಂತ, ನೀವೂ ನೋಡಿಕ್ಯಂಡ್ ಬಂದಿದ್ರ ಚೊಲೋ ಇತ್ತು ನೋಡ್ರಿ!
# posted by Satish : 10:57 am