ಅದೇ ಯಡ್ಡಿ ಆಲಿಯಾಸ್ ಯಡಿಯೂರಪ್ಪ ಆಲಿಯಾಸ್ ಡಿಸಿಎಂ - ಯಾವ್ದೋ ಒಂದು ಕೀಟನಾಶಕದ ಹೆಸ್ರು ಕೇಳ್ದಂಗಾಗಲ್ಲ? - ಪ್ರಚಂಡ ರೋಷಾವೇಶದಿಂದ ಮಾತಾಡ್ತಾರಂತಲ್ಲಪ್ಪ! ಅವ್ರು ಗುಡುಗಿದ ಹೊಡೆತಕ್ಕೆ ಗುಡುಗೇ ಹೆದರಿ ಮಳೆ ಬೀಳದಂಗೆ ಆಗಿ ಹೋತಂತೆ, ಎನ್ ಮಾಡದು? ಹಿಂದೆಲ್ಲಾ ಸಂಗೀತಗಾರ್ರು ಮೇಘಮಲ್ಲಾರ್ ಹೇಳಿ ಮಳೆ ತರ್ತಿರ್ಲಿಲ್ಲಾ, ಹಂಗೇ ನಮ್ ಎಡ್ಡಿ ಸಾಹೇಬ್ರು ಇಂತಾ ರಾಗ ಅಂತಿಲ್ಲ, ತಾಳಾ ಅಂತಿಲ್ಲ ಒಟ್ಟಿಗೆ ಗುಡುಗೋದ್ ಕಲ್ತವ್ರೆ. ಅವ್ರು ಅತ್ಲಾಗ್ ಎಲ್ಲಾ ಜರ್ನಲಿಸ್ಟ್‌ಗಳಿಗೆ ಬಯ್ದು ಹೋದ್ರಂತೆ, ಆಮ್ಯಾಕೆ ನಮ್ ಕುಸಾ ಸಾಹೇಬ್ರು ಎಲ್ರನ್ನೂ ಒಂಥರಾ ಕೂಲ್ ಮಾಡವ್ರೆ - 'ಎಡ್ಡಿ ಅಂದದ್ದಕೆ ಬೇಸ್ರ ಮಾಡ್ಕ್ಯಾಬ್ಯಾಡಿ - (ಅವ್ರು ಒಂತರಾ ಎಡವಟ್ಟೇ!) - ಇನ್‌ಮ್ಯಾಕೆ ನಾವೂ-ನೀವೂ ಏನಿದ್ರು ಬರೀ ಅಭಿವೃದ್ಧಿ ಬಗ್ಗೆ ಮಾತಾಡಾಣಾ' ಅಂದವರಂತೆ. ಅದರರ್ಥ ನಮ್ ಕರ್ನಾಟ್ಕದ ತುಂಬೆಲ್ಲ ಬರೀ ಅಭಿವೃದ್ಧಿಯೋ ಅಭಿವೃದ್ಧಿ - ಒಂಥರಾ ರಾಜ್‌ಕುಮಾರ್ ಮಗನ ಸಿನಿಮಾದ್ ಹಾಗೆ. ನಾವು ಯಾವ್ ಗಣಿ ಬೇಕಾದ್ರೂ ಕೊರಕಂತೀವಿ, ಅದರ ಅಭಿವೃದ್ಧಿ ಬಗ್ಗೆ ಮಾತಾಡ್‌ಬೇಡಿ ಅಂದವರಂತೆ.
ಧರಂ ಸಾಹೇಬ್ರು ಅದು ಬಿಟ್ಟು-ಇದು ಬಿಟ್ಟು ಈಗ ಜ್ಯೋತಿಷ್ಯ ಹೇಳೋಕ್ ಹಚ್ಚ್‌ಕೊಂಡೋರೆ, ನಿಮಗ್ ಗೊತ್ತಿಲ್ಲಾ? ದೋಸ್ತಿಯಿಂದಲೇ ದೋಸ್ತಿ ಸರ್ಕಾರದ ಕೊನೆ ಅಂದವರಂತೆ! ಅಂದ ಹಾಗೆ ಅವರ ಭವಿಷ್ಯ ಎಲ್ಲಿಗೆ ಬಂತೋ? ಜೀವರಗಿ ಭವಿಷ್ಯ ಕೇಳೋದೇ ಬ್ಯಾಡಾ ಅಲ್ವಾ?
ಕುಸಾ ತಮ್ಮ ಬರೀ ಹೇಳ್ಕೆ ಕೊಡಬ್ಯಾಡಾ, ಕೆಲ್ಸಾ ಮಾಡಿ ತೋರ್‌ಸೋಣು ಅಂತ ಅತ್ಲಾಗಿಂದ ರೇವ್ ಸಾಹೇಬ್ರು ತಿವಿದವರಂತೆ. ಇದೆಲ್ಲಾ ನೋಡಿದ್ ಮ್ಯಾಕ ನಮ್ ರಾಜ್ಯ, ಎಸ್‌ಪೆಷಲಿ, ಗೌಡ್ರು ಹಾಡ್ಯದಾಗ ಬಹಳಷ್ಟು ಕೆಲ್ಸಾ ನಡದಾವಂತs, ನೋಡಿಕ್ಯಂಬರಣ ಬರತೀರೇನ?
# posted by Satish : 4:53 pm