'ಸ್ನೇಹಿತ್ರಿಗ್ ಎಲ್ಲೂ ಕಾಲ ಇಲ್ಲಾ ಶಿವಾ, ನಾವೆಲ್ಲ ಸೇರಿಕ್ಯಂಡ್ ಕುಸಾ ನ ಮುಖ್ಯಮಂತ್ರಿ ಮಾಡಿದ್ವೋ, ಈಗ ಈ ವಯ್ಯಾ ನೋಡಿದ್ರೆ ಮನ್ಯೋರ್ ತಾಳಕ್ಕೆ ಕುಣಿಯೋ ಮಂಗ್ಯಾ ಅಗ್ಯಾನ...' ಅನ್ನೋ ಅರ್ಥದಲ್ಲಿ ಮೊನ್ನೆ ಸಂತೋಷ್ ಲಾಡ್ ಅವರ ಕೂಡಿ ಜಮೀರ್ ಅಹ್ಮದ್ ಸಾಹೇಬ್ರೂ ಇವರೂ ರೋಧನ ಹಚ್ಚಿದ್ರು ರ್ರೀ. ಇವರಿಬ್ಬರಿಗೆ ಬೇಕಾಗಿದ್ದು ಓನ್ಲಿ ಕುಸಾ ಫ್ರೆಂಡ್‌ಶಿಪ್ಪಂತೆ, ಆದ್ರೆ ಕುಸಾ ಈಗ ಯಾವ ದೋಸ್ತರ ಮಾತಿಗೂ ಗೋಣು ತಿರುಗಿಸ್ದೇ ಅಪ್ಪಾ, ಅಣ್ಣೋರ್ ಹೇಳಿದ್ದೇ ಪರಮಸತ್ಯ ಅಂತ ಕುತಗಂಡಾರಂತ!
ಕುಸಾ ಸಾಹೇಬ್ರು ಅಪ್ಪಾರ್ ಕಂಡ್ರೆ - ಅಂದ್ರೆ ದೊಡ್ಡ ಗೌಡ್ರು ಕಂಡ್ರೆ ಉರಿದು ಬೀಳ್ತಿದ್ದಿಲ್ಲ ಒಂದ್ ಕಾಲದಾಗ, ಅಥವಾ ಹಂಗ್ ನಟನೆ ಮಾಡಿದ್ರೋ ಯಾರಿಗ್ ಗೊತ್ತು? ಅಲ್ಲಪಾ, ಈ ಸಣ್ಣ ತಮ್ಮ ಅಧಿಕಾರ್‌ದಾಗಿದ್ರೆ ಅವರೆಲ್ಲಾ ಯಾಕ್ ಬರತಾರ ಕಡ್ಡೀ ಆಡ್ಸಾಕ ಅಂತ ನನಿಗಂತೂ ಹೊಳಿವಲ್ದು - ನಮ್ಮ ಕನ್ನಡ ಜಾಣ-ಜಾಣೆಯರಿಗೇನಾದ್ರೂ ಗೊತ್ತಾದ್ರ ತಿಳಸ್ರಿ...ನಾನು ಕೂಡ್ಲೇ ಲಾಡ್ ಸಾಹೇಬ್ರಿಗೆ ಫೋನ್ ಹಚ್ಚತೀನಂತ!
# posted by Satish : 10:55 am