ಕುಸಾ ಹೋಗಿ ಹೋಗಿ ಚಿಕ್ಕಕಾನ್ಯದ ಶಾಲೀ ಒಳಗ ಮಲಗ್ಯಾರಂತ್ ರೀ ಅಂತ ನಮ್ ಪಕ್ಕದ್ ಮನೆಯೋರು ಮಾತಾಡಿಕೊಳ್ತಿದ್ರು ರೀ...ಅದೇ ಸಮಯಕ್ಕಾ ಸಿದ್ರಾಮಣ್ಣಂದೂ ಒಂದ್ ಕಾಮೆಂಟ್ ಅಂತ್ ರೀ 'ರಾಜ್ಯದೊಳಗಾ ೨೯ ಸಾವಿರ ಹಳ್ಳಿ ಇದಾವು, ಅದರಾಗೆಲ್ಲ ಕುಸಾ ಮಲಗಕ್ಕಾಗಂಗಿಲ್ಲ, ಹಂಗ್ ಮಲಗಿದ್ರೂ ಉದ್ದಾರಾಗಂಗಿಲ್ಲ...'. ನಮ್ ಊರಾಗ ರಸ್ತಿಗಳು ದುರಸ್ತಿ ಆಗೋವು ಅಂದ್ರೆ ಯಾರಾದ್ರೂ ಮಿನಿಷ್ಟ್ರು ಬಂದಾಗ್ ನೋಡ್ರಿ. ಕೊನೀ ಪಕ್ಷ ಇಡೀ ಚಿಕ್ಕಕಾನ್ಯ ಉದ್ದಾರಾದಿದ್ರೂ ಆ ಶಾಲೀ ತಲೀ ಮ್ಯಾಗ ಕಿತ್ತೋಗಿರೋ ಹಂಚಾದ್ರೂ ಹೊಸತಾಗಿರ್ತಾವಾ? ಸಿದ್ರಾಮಣ್ಣಂಗ್ ಅಷ್ಟೂ ಗೊತ್ತಾಗಂಗಿಲ್ಲಾ ಅಂದ್ರೆ?
ಕುಸಾ ಬದ್ಲಿಗೆ ದೊಡ್ಡ ಗೌಡ್ರು, ಅವರ ಕುಟುಂಬಾ ಎಲ್ಲಾನೂ ಹೋಗಿ ದಿನಾ ಒಂದೊಂದ್ ಶಾಲೀ ಒಳಕ ಅಥ್ವಾ ಹೊರಕ್ ಯಾಕ್ ಮನುಗ್‌ಬಾರ್ದೂ? ಬಡ ಮಕ್ಳು ಸ್ಕೂಲ್ ಸಾಕಾಗ್ದೇ ಹೋದ್ರೆ ಬೇಕಾದ್ರೆ ಬಸ್‌ಸ್ಟ್ಯಾಂಡ್‌ನ್ಯಾಗ್ ಮಲ್ಲಕ್ಕಳ್ಳಿ, ಏನಂತೀರಿ? ನಿಮ್ ಬಸ್‌ಸ್ಟ್ಯಾಂಡು, ಸ್ಕೂಲಿನ್ಯಾಗೆ ಜಾಗಾ ಇಲ್ಲಾ ಅಂದ್ರ ಮೊದಲಾ ಹೇಳ್ರಪಾ, ಯಾಕಂದ್ರ ಈ ಗೌಡ್ರ ಪರಿವಾರ ಬಾಳಾ ದೊಡ್ಡದದಾ.
# posted by Satish : 9:55 am