ಯಾವಾಗ್ ನೋಡಿದ್ರೂ ಕುಸಾ ಸರಕಾರ ಮತ್ತ ರಾಜ್‌ಕಾರಣಿಗಳಿಗೆ ನಾನ್ ಬರೇ ಬಯ್ಯ್‌ತೀನಿ ಅಂತ ಅಂದ್‌ಕಂಡಿದ್ರೆ ಅದನ್ನ ನಿಮ್ಮ್ ಮನಸ್‌ನಿಂದ ತೆಗೆದ್ ಹಾಕ್ರಿ, ಯಾಕ್ ಈ ಮಾತ್ ಅಂತೀನಪಾ ಅಂದ್ರ, ಈ ಕುಸಾ ಸರಕಾರ ಮಾಡಿರೋ ಘನಂದಾರೀ ಕಾರ್ಯದೊಳಗೆ ಈ ಮರಾಠಿ ತೆಕ್ಕಿ ಒಳಗ ಬಿದ್ದಿರೋ ಬೆಳಗಾವಿನ್ಯಾಗ ಮಾಡಿರೋ ಅಧಿವೇಶನಾ ಐತಲ್ಲಾ, ಬಾಳಾ ಶಾಣೇ ಕೆಲ್ಸಾ ನೋಡ್ರಿ ಅದು.
ಸ್ವಲ್ಪ ದಿನದ ಹಿಂದ ನಿಮಗ ಬೆಳಗಾವಿ ಮೇಯರ್ ಮುಸುಡಿಗೆ ಕನ್ನಡದೋರು ಮಸಿ ಬಳ್ದಿದ್ ಗೊತ್ತಿರಾಕ ಬೇಕು, ಅದರ ಹಿನ್ನೆಲಿ ಒಳಗ ಈ ರೀತಿ ಅಧಿವೇಶ್ನಾ ಮಾಡಿದ್ರು ಅಂದ್ರ ನೋಡ್ರಿ ಅವಾಗ ನಮ್ ಜನ ಏನು ಅಂತ ಎಲ್ಲರಿಗೂ ಗೊತ್ತಾಕತಿ. ಅದನ್ನ ಬಿಟ್ಟು ಇವರು ಬೆಂಗಳೂರಿನ್ಯಾಗ ಸೇರಿಕ್ಯಂಬಿಟ್ಟು ಹಂಗಾಗ್ಲಿ, ಹಿಂಗಾಗ್ಲಿ ಅಂತ ಹಾರಾಡಿದ್ರ ಅದರಿಂದೇನಾಕತಿ? ಎಲ್ಲಿ ಸಮಸ್ಯಾ ಐತೋ ಅಲ್ಲೇ ಹೋಗಿ ಬಾಳುವೆ ನಡುಸ್ ಬೇಕಪಾ ಅದೇ ದೊಡ್ಡತನ. ಇಂತಾ ದೊಡ್ಡತನ ಕಂಡಾ ನಾನು ಕುಸಾ ಬಗ್ಗೆ ಒಂದು ಮೆಚ್ಚಿನ್ ಮಾತು ಅಂದ್ರ ನಿಮಗ್ಯಾರಿಗೂ ಬೇಜಾರಂತೀ ಇಲ್ಲ ಹೊದಿಲ್ಲೋ?
ನಮ್ ಕನ್ನಡಾ ಮಂದಿ ಎಲ್ಲ್ ಹೋದ್ರೂ ಕಿತ್ತಾಡೋದ್ ಬಿಡ್ತಾರೇನ್ರೀ? ಅಗಸನ ಕಟ್ಟಿ ಹತ್ಲಿ ಅಮೇರಿಕಾ ಮುಟ್ಲಿ ಜನಾ ಎಲ್ಲಾ ಒಂದಾ, ಇಲ್ಲಾಂತ್ ಅಂದ್ರ ಬೆಳಗಾವಿನ್ಯಾಗಾದ್ರೂ ಇನ್ನೂ ಎರಡ್ ದಿನಾ ಸೆತ ಮುಟ್ಟಿಲ್ಲಾ ಅಷ್ಟೊರಳಗಾ ಕಿತ್ತಾಡೋದು, ಬಡಿದಾಡೋದು, ಕೂಗಾಡೋದು ಅಂದ್ರೇನು? ಮಂಗ್ಯಾನ್ ತಗೋಂಡ್ ಹೋಗಿ ಎಲ್ಲಿ ಇಟ್ರ ಏನ್ ಬಂತು, ಯಾವಾಗ್ ನೋಡಿದ್ರೂ ಇವರ್ದೆಲ್ಲಾ ಒಂದೇ ರಾಗಾ ನೋಡ್ರಿ. ಅದೂ ಅಲ್ದೇ ನೆಟ್ಟಗೆ ಇದ್ದ ಬೆಳಗಾವೀನ ಉಳಿಸ್ಕ್ಯಣಾಕ್ ಬರಂಗಿಲ್ಲ ಇನ್ನ ಕಾಸರ್‌ಗೋಡ್ ಕೇಳ್ತಾರಂತೆ! ಅವರೇನ್ ಮಲಯಾಳೀ ಕುಟ್ಟಿಗಳು ಸುಮ್ನಿರ್‌ತಾರಂತೀರಾ ಮಹಾ ಘಾತಕ ನನ್ ಮಕ್ಳು ಮತ್ತೇನಾರಾ ಒಂದ್ ಕಿತಬಿ ಎಬ್ಬಿಸ್ತಾರಷ್ಟೇ.
ನಿಜಾ ಹೇಳ್ಬಕು ಅಂದ್ರ ನಮ್ ಜಾಗ ನಾವ್ ಮೊದ್ಲು ಉಳಿಸ್ಕ್ಯಂಡ್ ಹಸುರ್ ಮಾಡ್ಬಕು, ನಮ್ ಜನನ್ನ ಚೆನ್ನಾಗಿ ಇಟ್ಕಂಡ್ ಬಂಗಾರ ಬೆಳಿಬಕು, ಅವಾಗ ಕಾಸರ್‌ಗೋಡ್ ಮಂದಿ ತಾವಾ ಹುಡಿಕ್ಕ್ಯಂಡ್ ಬರತಾರ ಕನ್ನಡ್ ನಾಡ, ಅದನ್ನ ಬಿಟ್ಟ್ ಮಂಗ್ಯಾನಂಗ್ ಕಿತ್ತಾಡಿಕ್ಯಂಡ್ ಕುಂತ್ರ ಅಲ್ಲಿರೋ ಕಮ್ಮ್ಯೂನಿಷ್ಟ್ ಅಧಿಕಾರಾನೇ ಚೆಂದಾ ಅಂತ ಅಲ್ಲೇ ಇರತಾರ್ ನೋಡ್ರಿ, ಏನಂತೀರಿ?
# posted by Satish : 10:27 am