Sunday, July 30, 2006

ಚಿನ್ನದ್ ಗಣಿ ಆರಂಭ್‌ಸ್ತಾರಂತೆ!

ಓ ಅದೆ ಹೇಳೋಕ್ ಕನ್ನಡಾ ನಾಡು, ದುಡಿಯೋಕ್ ತಮಿಳ್ ಜನ ಇರೋ ನಮ್ ಕೋಲಾರದಲ್ಲೇ ಚಿನ್ನದ್ ಗಣೀನ್ ಮತ್ತೆ ತೆರೀತಾರಂತೆ. ಈ ಸರ್ತಿ ವಿಶೇಷಾ ಏನ್ ಗೊತ್ತಾ, ಗಣಿ ಕಂಪನಿ, ಅದೇ ಭಾರತ ಸರ್ಕಾರದ್ದು ೧೦೩೭ ಕೋಟಿ ರೂಪಾಯಿ ಸಾಲ ಮನ್ನಾ ಮಾಡಿದ್ದಾರಂತೆ ಗುರುವೇ. ಅಲ್ಲಾ ಬಡವಾ ಬಗ್ಗರೂ ಮಾಡಿರೋ ಸಾವ್ರಾರು ರೂಪಾಯ್ ಮನ್ನಾ ಮಾಡ್ರಿ ಅಂದ್ರೆ ಅದಕ್ಕೊಂದ್ ದೊಡ್ಡ ನೆಪಾ ಹೇಳೋ ಮಂದಿ ಸರ್ಕಾರ್‌ದೋರ್ ಮಾಡಿರೋ ಸಾಲಾನಾ ಸರ್ಕಾರ್‌ದೋರೇ ಅದ್ ಹೆಂಗೆ ಮನ್ನಾ ಮಾಡ್ತಾರೇ ಅಂತ? ಬಿತ್ತಾ ನಮ್ ತಲೀ ಮೇಲೆ ಮತ್ತಿಷ್ಟು ಸಾಲದ ಹೊರೆ!

ನಂಗೇನ್ ಬೇಜಾರ್ ಇಲ್ಲ, ಅವರು ಚಿನ್ನದ್ ಗಣಿ ತೆರ್ ಕೊಳ್ಲಿ. ಆದ್ರೆ ಹಿಂದೆ ಲುಕ್ಸಾನ್‌ದಾಗ್ ನಡಿತಿತ್ತಲ್ಲ, ಅದನ್ನ ಎಲ್ಲ ಸರಿ ಮಾಡ್ಯಾರೋ ಹೆಂಗೆ? ಅಲ್ಲಿರೋ ಸಮಸ್ಯೆ ಸರೀ ಮಾಡ್ದೇ, ಇರೋ ಸಾಲ ಮನ್ನಾ ಮಾಡ್ಕೊಂಡು ಮತ್ತೆ ಫ್ಯಾಕ್ಟರಿ ಓಪನ್ ಮಾಡ್ಕೊಂಡ್ ಕುತಗೊಂಡ್ರೆ ಎಲ್ಲ ಬಗೆ ಹರದಂಗಾತೇನು?

ನಮ್ ಚಿನ್ನದ್ ನಾಡಲ್ಲಿ ಇನ್ನೂ ಹದಿನೈದ್ ಟನ್ ಚಿನ್ನಾ ಇದೆಯಂತೆ, ಒಂದೊಂದ್ ಟನ್ ಮಣ್ಣಿಗೆ ೩-೫ ಗ್ರಾಮ್ ಚಿನ್ನ ಸಿಗುತ್ತಂತೆ. ಇಲ್ಲಿ ಕುಸಾ ಸರ್ಕಾರ ಗಣಿ ವಿವಾದಕ್ಕೆ ಸಿಕ್ಕಿರೋ ಹಿನ್ನೆಲೆನಲ್ಲೇ ಮಮೋಸಿ ಸರ್ಕಾರ ಮತ್ತೂ ಭೂಮಿ ಅಗೆಯೋಕ್ ಪರ್ಮಿಷನ್ ಕೊಟ್ಟಿರೋದು ಒಂಥರಾ ಕಾನ್‌ಸ್ಪಿರಸಿ ಅನ್ಸಲ್ಲಾ! ಇರ್ಲಿ, ನಮ್ ಭೂಮೀನ್ ತಾನೆ ಕೊರಕಳ್ಲಿ ಬಿಡಿ. ಚಿನ್ನಾ ತೆಗೆದ್ ತೆಗೆದ್ ಪಿರಂಗಿಯೋರಿಗೆ ಕೊಟ್ಟು ಬೆಂಡೋಲೆ ಮಾಡಿಸ್‌ಕೊಳ್‌ದಿದ್ರೆ ಸಾಕು.

ಕುಸಾ ಈ ವಿಷ್ಯಾ ಕೇಳಿ ಇನ್ನೂ ಕುಸಿದಿದ್ದಾರೇಂತ ಸುದ್ದಿ, ನಿಮಗೇನಾದ್ರೂ ಗೊತ್ತಾ?

# posted by Satish : 10:51 pm
Comments: Post a Comment



<< Home

This page is powered by Blogger. Isn't yours?

Links
Archives