ಇದೊಳ್ಳೇ ಕತೆ ಆಯ್ತಲ್ಲಾ, ನಾವ್ ಓಟ್ ಹಾಕ್ಸಿ ಕಳಸ್ತೀವಿ ಅಷ್ಟೇನೇ ಹೊರತೂ ಇಂತೋರು ಇಂತಿಂಥ ಮಂತ್ರೀ ಮಹೋದಯ್ರಾಗ್ರೀ ಅಂತಾ ಏನಾದ್ರೂ ಹೇಳ್ತೀವೇ? ಇವರಿಗೆಲ್ಲ ಕಷ್ಟ ಸುತ್ಗೊಂಡ್ ಹೊತ್ತಿಗೆ ಜನಾದೇಶ, ಜನರ ಒಪ್ಪಿಗೆ ಎಲ್ಲ ಲೆಕ್ಕಕ್ಕೆ ಬರುತ್ತೆ, ಅದೇ ಗಂಗಾಳ್ದಾಗೆ ಹಾಕ್ಕೊಂಡ್ ಹೊಡೀತಿರ್ತಾರಲ್ಲ, ಆವಾಗೇನಾದ್ರೂ ಈ ಬಡ ಪ್ರಜೆ ಕಣ್ಣಿಗೆ ಕಾಣ್ತಾರೋ ಅಂತ ಕೇಳ್ಬೇಕು ನೋಡಿ.
ಐದು ವರ್ಷಕ್ಕೆ ಮೂರು ಮತ್ತೊಂದು ಮಂತ್ರಿಗಳಾಗ್ಲಿ, ಅಸೆಂಬ್ಲಿಲಿದ್ದೋರೆಲ್ಲ ಪಟ್ಟ ಹತ್ಲಿ ಅಂತ ಶಾನೆ ನಾನಂತೂ ಯಾವಾಗೂ ಕೇಳ್ದಂಗಿಲ್ಲ, ನಿಮಗೇನಾರೂ ಜ್ಯಾಪ್ಕ ಇದ್ರೆ ಹೇಳಿ. ಕುಸಾ ಸಾಹೇಬ್ರೂ ಇಡೀ ರಾಜ್ಯಕ್ಕೆ ನೀರು ಕುಡಿಸೋ ಪ್ಲಾನ್ ಹಾಕವರಂತೆ, ಅಂದ್ರೆ ಕುಡಿಯುವ ನೀರಿನ ಯೋಜನೆ ಹಮ್ಮಿಕೊಂಡಿದ್ದಾರಂತೆ ಅಂತ ಹೇಳ್ದೆ, ಇಷ್ಟು ದಿವ್ಸ ಮತ್ತೆ ಮಾಡಿದ್ದೇನು, ಇವರು ಕುಡ್ಸಿದ್ ನೀರ್ನೇ ಅಲ್ವೇ ನಮ್ಮೋರೆಲ್ಲ ಕುಡೀತಿರೋದು - ಅವರದ್ದೇ ಆಟ, ಅವರದ್ದೇ ಮಾಟನಪ್ಪಾ, ಮತ್ತೆ ಅದಕ್ಕೊಂದ್ ಯೋಜ್ನೆ ಅಂತ ಹೆಸರ್ಯಾಕೋ - ಓ, ಗೊತ್ತಾಯ್ತು ಬಿಡಿ, ಹಂಗಾದ್ರೂ ಒಂದಿಷ್ಟು ದುಡ್ ಹೊಡಿಯೋದಕ್ಕೆ ಲೆಕ್ಕಾ ಇರ್ಲಿ ಅನ್ನೋ ಜಾಣ್ತನ ಇದ್ದ್ರಿರಬೋದು, ಯಾವನಿಗ್ಗೊತ್ತು?
ನೋಡಿ ಸಾರ್ "ಸಿದ್ದರಾಮ್ಯಯ ೫ -೬ ಬೋರ್ಡ್ ಹಾಕ್ಕಂಡು ಈಗ ಅದನ್ನೂ ತೆಗೆದು ಹಾಕಿ ಅಧಿಕಾರಕ್ಕಾಗಿ ಸೋನಿಯಾ ಗಾಂಧಿ ಸೆರಗಿನಡಿ ಹೊಕ್ಕಂಡವ್ರೆ. ಅವರ ಬಗ್ಗೆಲ್ಲ ನಾವ್ ತಲೆ ಕೆಡಿಸ್ಕಳ್ಳಲ್ಲ" ಅಂತ ಹೇಳ್ಕೆ ಕೊಡುತಾರಲ್ಲ ಎಂತ ಜನಾ ಇದ್ದಿರಬೋದು ನೀವೇ ಲೆಕ್ಕಾ ಹಾಕ್ಕಳಿ - ಹಿಂಗ್ ಮಾತನಾಡಿ ಅನ್ನೋದೇ ಜನಾದೇಶ್ವಾ, ಆ ದೇವನೇ ಬಲ್ಲ!
# posted by Satish : 1:04 pm