ನಮ್ ಸಾಹೇಬ್ರು, ಅದೆ ಕುಸಾ ಅವ್ರು, ಬೇರೇ ಏನಿಲ್ಲ ಅಂದ್ರೂ ಕನ್ನಡ ಜನಾ ಕಂಡ್ರೆ ಬಾಳಾ ಪ್ರೀತಿ ತೋರುಸ್ತಾರ್ರೀ...ಛೇ ಬಿಡ್ತು ಅನ್ರೀ, ಕನ್ನಡಾ ಬರೋ ಜನಾ ಅಲ್ಲ, ಇಂಗ್ಲೀಷ್ ಬರದಿರೋ ಜನಾ ಅಂತ ಹೇಳ್ದೆ! ಅವ್ರಿಗೋ ಇಂಗ್ಲೀಷ್ ಮಾತಡಕ್ ಅವರ ಅಪ್ಪಾ ಅಮ್ಮಾ ಕಲಿಸಿಲ್ಲಪಾ, ಅದಕ್ಕೇ ಅವರಂಗ್ ಇರೋ ಮಂದಿ ಅಂದ್ರೆ ಒಂಥರಾ ಶಾನೆ ಪ್ರೀತಿ ಅಂತಾರಲ್ಲ ಹಂಗೆ.
ಹೌದು, ನಮ್ ದೊಡ್ಡ್ ಗೌಡ್ರಿಗೆ ಇಂಗ್ಲೀಷ್ ಬರ್ತತೋ? ಅಂತ ಕೇಳಿದ್ದಕೆ ನಮಗೆ ಎಲ್ಲಾ ಹೊಡೆದು ಓಡಿಸಿದ್ರು ರೀ, ಅವರ ಊರಿಂದ. ಇಂಗ್ಲೀಷ್ ಬರಲೀ, ಬಿಡಲೀ ನಮ್ಮೂರ್ ಮುದ್ದೇ ಹೈದ ಪ್ರಧಾನ ಮಂತ್ರೀ ಆದನೋ ಇಲ್ಲೋ, ಅಲ್ಲಿ ಬೆಚ್ಚಗಿರೋ ಖುರುಚೀ ಮ್ಯಾಗ ಕುತಗೊಂಡು ನಿದ್ದೀ ಹೊಡೆದರೋ ಇಲ್ಲೋ. ಹಂಗಾs, ಕುಸಾ ಸಾಹೇಬ್ರೂ ಅಂತ ತಿಳಕೋರಿ. ಮ್ಯಾಗ ಹೋಗೋದಕ್ಕ, ಖುರುಚೀ ಮ್ಯಾಗ ಕುಂದ್ರೂದಕ್ಕ ಭಾಷೆ ಯಾತಕ್ ಬರಬೇಕ್ರಿ? ಹಂಗಾs, ರಾಜಕೀಯ ಮಾಡೋದಕ್ಕೂ ಅಷ್ಟೆ ಅಂದುಕೋರಿ.
ಕುಸಾ ಸಾಹೇಬ್ರು ಬೆಂಗ್ಳೂರ್‌ನಾಗಿರೋ ಎಲ್ಲರಿಗೂ ಅಂದ್ರ - ಹೊಟೇಲ್ ಮಾಣಿಗಳಿಂದ ಹಿಡಿದು ಅಟೋರಿಕ್ಷಾ ಡ್ರೈವರ್ರುಗಳ ತನಕಾ ಒಂದೊಂದ್ ಸೈಟ್ ಕೊಡುಸ್ತಾರಂತ, ಹಂಗ ಕೊಡಿಸಿದ್ ಸೈಟಿಗೆ ಅವರ ಮಕ್ಳು ಮೊಮ್ಮಕ್ಳು ಅಧಿಕಾರಕ್ಕ ಬಂದ ಮ್ಯಾಗ ಕೊಡೋ ಅನುದಾನದಿಂದ ಮನೀನೂ ಕಟ್‌ಸೋದಕ್ಕೆ ಪ್ಲಾನ್ ಐತಂತ. ಅತ್ಲಾಗ ನಾನೂ ಒಂದು ಸೈಟಿ ಅರ್ಜಿ ಬಿಸಾಕಾನ ಅಂದ್ರೆ ಮೊದಲು ಯಾವ್ದಾದ್ರೂ ಹೋಟ್ಲು ಸೇರಿಕ್ಯಳು ಪರಿಸ್ಥಿತಿ ಬಂದೇತ್ ನೋಡ್ರಿ! ಏನ್ ಮಾಡೋಣು?
# posted by Satish : 10:18 am