ಇನ್ನೇನ್ ಸ್ವಾಮಿ ಹೇಳಣಾ, ಇದೇ ಕುಸಾ ಸಾಹೇಬ್ರೇ ಆರು ತಿಂಗಳ ಹಿಂದೆ ಬಂಡಾಯ ಬಿದ್ದು ಅದ್ಯಾವ್ದೋ ರೆಸಾರ್ಟ್‌ನಲ್ಲಿ ಎಲೆ ಆಡಿಕ್ಯಂಡು ತಮ್ಮ ಪಂಗಡದ ಒಂದಿಷ್ಟು ಜನ್ರ ಕೂಡಿ ಕಾಲ ಕಳ್ದಿರ್‌ಲಿಲ್ಲಾ? ಇವತ್ತು ನೋಡಿದ್ರಾ ಒಳ್ಳೇ ಪೆಟ್ರೋಲ್ ಬಂಕ್‌ನ್ಯಾಗ ಲೀಟರ್ ಲೆಕ್ಕಾ ಇಟ್‍ಗಳೋ ಮೀಟರ್‌ನಂಗ ಕುಸಾ ಸಾಹೇಬ್ರಿಗೆ ಕುರುಚೀ ಏರಿ ನೂರಾ ಎಂಭತ್ತು ದಿನಾ ಆತು, ಇನ್ನೊಂದು ಇಪ್ಪತ್ತ್ ದಿನದಾಗ ಇಳಿದುಬಿಡಾ ಶಿವಾ ಅಂತ ಗಂಟ್ ಬಿದ್ದಂಗ್ ಕಾಣ್ತಾರಲ್ಲಾ! ಏನ್ ಹೇಳೋಣು, ಇಂಥಾ ಆಡ್‌ನಾಡಿ ಜನಗಳ್ ಬಗ್ಗೆ.
ಸಂತೋಷ್ ಲಾಡ್ ಸವಕಾರ್ರು ತಾವೇ ಲಾಡು ತಿನ್ನಾಕ್ ಹತ್ಯಾರಂತ್ ರೀ, ಕುಸಾ ಸಾಹೇಬ್ರು ಇಕ್ಬಾಲ್ ಮತ್ತು ಅವರ ಗೆಣ್ಯಾ ಜಮೀರ್ ನಂಬಿಕ್ಯೊಂಡ್ ಕೆಟ್ರು ಬಿಡ್ರಿ. ಜನಾರ್ಧನ ರೆಡ್ಡಿಯೋರು ಅದೇನೋ ಕ್ಯಾಸೆಟ್ ಬಿಡುಗಡೆ ಮಾಡ್ತಾರಂತೆ, ಅದರ ನಂತರ ಕುರುಚೀ ಕಾಲಿನ ಹಂಚಿಕೆ ನಡಿಯುತ್ತೆ ಅನ್ನೋದು ಎಲ್ಲರ ಅಂಬೋಣ. ದೊಡ್ಡ ಗೌಡ್ರಿಗೂ ವಯಸ್ಸಾತು, ಎಷ್ಟೂ ಅಂತ ಮಕ್ಳನ್ನ ಹೊಟ್ಟೆ ಹೊರದಾರೂ? ಹೇಳಿಕೊಟ್ಟ ಬುದ್ಧಿ, ಕಟ್ಟಿಕೊಟ್ಟ ಬುತ್ತಿ ಎಲ್ಲೀವರೆಗೆ ಬಂದೀತೂ ಅಂತೀನಿ.
ಈಗ ಹನ್ನೆರಡು ಜನಾ ಎದ್ದ್ ನಿಂತ್ಯಾರಂತ, ಹನ್ನೆರಡು ಇದ್ದದ್ದು ನೂರಾ ಹನ್ನೆರಡು ಆತು ಅಂದ್ರ ಬೆಂಗ್ಳೂರಿಂದ ಹರದನಹಳ್ಳೀವರೆಗೂ ಗೌಡ್ರು ತಂಡ ಓಡಿಕ್ಯಂಡ್ 'ಹಾ, ಹೂ, ಬಿಕ್ಕಾನಾಕ್ಕಾ ಬಳಲೇ, ಬಿಕ್ಕೈ ಬಳಲೇ...' ಅಂತ ಗಂಜೀ ಕುಡೀಬೇಕಾಗ್‌ತತೇನೋ ನೋಡೋಣಾ?!
# posted by Satish : 11:02 am