ನಮ್ ದೇಶ್‌ದಾಗ ಯಾರಿಗೆ ರೊಕ್ಕ ಹುಟ್ಟದಿದ್ರೂ ಈ ವಿಮಾನ ಕಂಪನಿಯೋರಿಗ್ ಮಾತ್ರ ಯಾವತ್ತೂ ಕೊರತಿ ಅನ್ನೋದಾಗೋದಿಲ್ಲ ನೋಡ್ರಿ, ಈ ಮಾತು ಯಾಕಂತೀನಿ ಅಂದ್ರ, ಪ್ರತಿನಿತ್ಯ ಒಬ್ರಲ್ಲಾ ಒಬ್ರು ಬೆಂಗ್ಳೂರಿಂದ್ ಡೆಲ್ಲಿ, ಡೆಲ್ಲೀಯಿಂದ ಬೆಂಗ್ಳೂರಿಗ್ ಹೋಗ್ತಾರಲ್ಲ, ಇನ್ನೇನಾಕತಿ ಮತ್ತ? ಬರೀ ನಮ್ ಕನ್ನಡಾ ಮಂದಿ ಅಷ್ಟೇ ಅಲ್ಲ, ಎಲ್ಲಾ ರಾಜ್ಯದೋರೂ ಹೋಕ್ತಾರಂತ್ ರೀ, ಅಕ್ಕ ಪಕ್ಕದ ರಾಜ್ಯದೋರ್ ಹೋಗಿ-ಬಂದೂ ದುಡ್ಡೂ ಕಾಸು ಮಾಡಿಕ್ಯಂಡ್ರ್ ನಮ್ ರಾಜ್‌ಕಾರ್ಣಿಗಳು ಬರೀ ಅವರ ದುಕ್ಕಾ ಇವರಿಗೆ ಇವರ ದುಕ್ಕಾ ಅವರಿಗೆ ಹಂಚೋಕ್ ಹೋಗಿ ಜೋಲ್ ಮುಖಾ ಹಾಕ್ಕ್ಯಂಬರತಾರ್ ನೋಡ್ರಿ - ಇಂತೋರಿಗೆಲ್ಲ ಹಿಡ್ದು ನಡು ರಸ್ತಿ ಮ್ಯಾಗ್ ನಿಲ್ಲಸಿ ನಾಲ್ಕು ಬಾರ್ಸುಬೇಕು ಅನ್ಸಂಗಿಲ್ಲ?
ಜರಾ ಜನಾರ್ದ್ನ ರೆಡ್ಡೀ ಕತೀನೆ ತಗಳ್ರಿ, ಈ ವಯ್ಯಾ ಮಂಗ್ಳ್‌ವಾರ ಗಣಿ ಕತಿ ಹೇಳ್ತನಿ ಅಂತ ಕುಂತಿದ್ರು, ಈಗ ನೋಡಿದ್ರೆ ನಾಳಿ ಅನ್ನಕ್ ಹಿಡದಾರ. ನಾಳಿ ಮನೀ ಹಾಳಾತು, ಅದು ಎನ್ ವಿಷ್ಯಾ ಹೇಳೋ ಶಿವಾ ಅಂತ ಕುಂದರಬೇಕ್ ಅಷ್ಟೇ. ಅತ್ಲಾಗಿಂದ ಕುಸಾ ಸಾಹೇಬ್ರು ನಮ್ ಸರಕಾರ್ ಛೊಲೋ ಐತಿ, ಐನಾಗಿ ನಡೀತೈತಿ, ಏನೂ ತೊಂದ್ರಿಲ್ಲ ಅಂತಾರ, ಇತ್ಲಾಗ್ ನೋಡಿದ್ರೆ ರೆಡ್ಡಿ ಸಾಹೇಬ್ರು ಕುಸಾ ಕುರುಚೀ ಕೆಳಗ ಬಾಂಬ್ ಸಿಡಸ್ತೀನಿ, ಕುಸಾ ಕುಂದರೋ ಕುರುಚಿ ಹಾರಿ ಬೀಳೋ ಹಂಗ ಮಾಡತೀನಿ ಅಂತಾರ - ಅತ್ಲಾಗ್ ನೋಡಿದ್ರೆ ದೊಡ್ಡ ಗೌಡ್ರುದ್ದು ಇನ್ನೂ ನಿದ್ದೀನೆ ಆದಂಗಿಲ್ಲ - ನನಗಂತೂ ಕಾದೂ-ಕಾದೂ ಸಾಕಾಗೈತಿ ನೋಡ್ರಿ.
ಎಲ್ಲಾ ಅಷ್ಟೇ ರೀ, ಈ ರೆಡ್ಡಿ ಹೇಳೋ ಹುಳುಕಿಗೆ ಆ ಡೆಲ್ಲಿ ಅಮ್ಮನ ಕೃಪೆ ಬ್ಯಾರೆ ಬೇಕು. ಯಾವತ್ತಾದ್ರೂ ಇವ್ರು ತಮ್ಮ ಸ್ವತಾ ಯೋಚ್ನೀಯಿಂದ ಕೆಲಸ ಅಂತ ಮಾಡಿದ್ರೆ ಗೊತ್ತಿರತಿತ್ತು, ಎಲ್ಲದಕ್ಕೂ ಡೆಲ್ಲಿ ಹತ್ತೀ-ಇಳಿದೂ ಮಾಡ್ತಾರ, ಅದೇನ್ ಕಲತಾರಂತ ಇಷ್ಟು ದಿನಾ ರಾಜಕೀಯದಾಗs?
# posted by Satish : 10:13 am