Saturday, September 16, 2006

ನೆಟ್ಟಗೆ ತಮ್ಮದನ್ನ ನೋಡಿಕೊಳ್ಳೋಕ್ ಬರದಿರೋ ಮಂದಿ

ನೀವಾ ನೋಡ್ರಿ, ಇದನ್ನೇ ಅನ್ನೋದು ರಾಜಕಾರಣಾ ಅಂತ, ತಮ್ ಬೆನ್ನು ತಮಿಗೆ ಕಾಣಲ್ಲ ಅನ್ನೋದು ಸುಳ್ಳ್ ಹೆಂಗಾಕತಿ? ಈ ಮನ್ಷಾ ಧರಂ ಸಿಂಗ್ ಇದಾರಲ್ಲ ಮಹಾ ಬೆರಕಿ ಮನುಷಾ ರೀ, ಯಾಕ ಅಂದ್ರ - ತಮ್ಮ್ ಸರಕಾರ ಇದ್ದಾಗ ಅತ್ಲಾಗ್ ಮುನಿಸಿಪಾಲಿಟಿ ಗಟಾರ ಆಗಿ ಹೇಸಿಗೆ ಹೊಡೀತಿತ್ತು, ಅತ್ಲಾಗ ತಮ್ಮ ಜೀವರಗಿ-ಗುಲಬರ್ಗಾ ಕ್ಷೇತ್ರನೂ ಉದ್ಧಾರ್ ಆಗಲಿಲ್ಲ, ಮಧ್ಯದಾಗ ನಾಚಿಗಿ ಮಾನ ಮರ್ಯಾದೆ ಇಲ್ದೋರ್ ಥರಾ ಕುರುಚೀ ಬಿಟ್ಟು ಹೋಗಿದ್ದೂ ಅಲ್ದೇ ಈಗ ನೋಡ್ರಿ ಸುಕಾ ಸುಮ್ನೇ ಕುಸಾ ಸರ್ಕಾರದ್ ಮ್ಯಾಗ ಬೆಟ್ಟ್ ತೋರ್ಸಾಕ್ ಬಂದಾರ. ಅದೇನೋ ಅಂತಾರಲ್ಲ, ತಾನು ಉಣ್ಣೋ ಎಲಿ ಒಳಗ ಕತ್ತಿ ಸತ್ತ್ ಬಿದ್ದತಿ, ಆದ್ರೂ ಮಂದಿ ಎಲ್ಯಾಗಿನ ನೊಣಾ ತೋರ್ಸದ್ ಬಿಡಂಗಿಲ್ಲ ಅಂತ ಹಂಗಾತು ಇವರ ಕತಿ.

ಇವ್ರಿಗ್ ಏನ್ ಬೇಕಾಗತಿ ಗೊತ್ತನು? ಕುಸಾ ಸಾಹೇಬ್ರು ಕಾಲ್ ಹಿಡ್ದು ಎಳೀಬಕು, ಸರ್ಕಾರ ಮುಕ್ ಅಡ್ಯಾಗಿ ಬೀಳ್‌ಬಕು. ಅಮ್ಯಾಕ ಚುನಾವಣೀ, ಮತಾ ಕೊಡ್ರಿ ಅಂತ ಭಿಕ್ಷಾ ಬೇಡ್ ಬಕು, ಮತ್ತ್ ಕಾಂಗ್ರೇಸ್ ಅಧಿಕಾರಕ್ಕ ಬಂದು ಆವಮ್ಮ ಇಟಲಿ ಮಾತಾ ತಾಳಕ್ಕ ಕುಣಿಬಕು.

ಯಾರ್ ಕೊಡತಾರ್ ರೊಕ್ಕಾ? ಈ ಚುನಾವಣೀ ನಡೀತತಲ ಅದೇನ್ ಪುಕ್ಕಟಿ ಆಕತೇನು? ಅದು ನಮ್ ರೊಕ್ಕಾ ಸಾರ್, ಧರಮ್ ಸಾಹೇಬ್ರ ನಿಮ ತಲಿ ಗರಮ್ ಆಗೇತಿ ಅಂತ ನಮಗೂ ಗೊತ್ತದ, ಅದಕ್ಕ ಪೂಜಾರಿ ಹಿಡ್ದು ಕೇಳ್ರಲ, ಯಾಕ್ ಹಿಂಗಾ ಅಂತ, ಅದನ್ನ ಬಿಟ್ಟು ಸರಕಾರಕ್ಕ ಅಡ್ಡಗಾಲ್ ಕೊಟ್ಟು ಕೆಡವ್ ಬೇಡ್ರಪ್ಪೋ. ನಮ್ ರಾಜ್ಯದ ಸರಕಾರ ಅಂದ್ರ ದೇಶ್‌ದಾಗ ಯಾವನೂ ಒಂದ್ ನಾಕಾಣಿ ಬೆಲೀನೂ ಕೊಡದಿರೋ ಪರಿಸ್ಥಿತಿ ಬಂದಿದ್ದೇ ನಿಮ್ಮಿಂದ, ಆವಯ್ಯ ಕೃಷ್ಣಾ ಇರೋ ಮುಂದಾ ಎಷ್ಟೋ ಚೆಂದಿತ್ತು.

ನಾಕ್ ದಶಕಾ ನೀರ್ ಕುಡಿದೀರಿ, ಇಷ್ಟೂ ಗೊತ್ತಾಗಂಗಿಲ್ಲ ಅಂದ್ರೆ ಹೆಂಗ?

# posted by Satish : 2:30 pm
Comments:
re kaLu avaare....
daramsingh avaradu ello emme charma anta odida nenapu...( avaru kaNodu hAge ...adu bere mAtu)...
avariNda enu agalilla aMta berevara mele gobe kurista idare...
 
ಖರೇವಂದ್ರು ಅವರ್ದು ಎಮ್ಮೀ ಚರಮಾನೇ ನೋಡ್ರಿ, ಮಹಾಂತೇಶೋರೆ. ಇವರ ಆಟ ನೋಡಿ-ನೋಡೀ ಯಾರೋ ಸತ್ಯವಾದ್ ಮಾತ್ನೇ ಹೇಳವರೆ.

ತಮ್ಮ್ ಕಾಲ ಆತು ಅಂತ ಈ ಮಂದಿ ರಿಟೈರ್ ಆಗೋ ಲಕ್ಷಣಾನೇ ಕಾಣಂಗಿಲ್ಲಲ್ಲ, ಹೊಸ ನೀರು ಬರೋಕ್ ಆಸ್ಪದಾನೇ ಇದ್ದಂಗಿಲ್ಲ್ ನೋಡ್ರಿ ಈ ಹಳೇ ನೀರು ಹೋಗೋವರೆಗೂ
 
Post a Comment



<< Home

This page is powered by Blogger. Isn't yours?

Links
Archives