Wednesday, November 08, 2006

ಆಕ್ರಮ ಕಟ್ಟಡಗಳು ಅಂದ್ರೆ...ನಮ್ ಗೌಡರ ಮನೀನು ಬಂತೇನು?

'ಹೌದಲ್ವ್ರಾ, ದೊಡ್ಡ ಮನುಷ್ಯರಿಗೆ ಎಲ್ಲೆಲ್ಲೋ ತಾವು! ಅವರಿಗಿರೋ ಆಸ್ತಿ ಏನು, ಅಂತಸ್ತ್ ಏನು ಯಾರು ಬಲ್ಲೋರು? ದೊಡ್ಡೋರ ಆಟವೆಲ್ಲ ದೊಡ್ಡದೇ...' ಪ್ರಜಾವಾಣಿ ಹೆಡ್‌ಲೈನ್ ಓದಿಕೊಂಡು ನಂಜ ನನ್ ಮುಸುಡಿಗೆ ಒತ್ತಿ ಹಿಡಿದು ತೋರಿಸಿದ ನೋಡಿದ್ರೆ ಕುಸಾ ಸಾಹೇಬ್ರೂ ವತಿಯಿಂದ ಡಿಲ್ಲಿನ್ಯಾಗೆ ನಡೆದಂಗೆ ಕಾರ್ಯಾಚರಣೆ ಮಾಡ್‌ತಾರಂತೆ ಅಂತ ತಿಳೀತು.

'ನಂಜೂ, ನೋಡೋ...ಇಂತೋರ್ ಮಾತೆಲ್ಲ ನಂಬೋ ಮಾತೇನ್ಲಾ...' ಅಂದೆ.

'ಹೌದ್ ಸಾಮಿ, ಯಾಕಿರ್‌ಬಾರ್ದು?' ಅಂತ ನನ್ನನ್ನೇ ಪ್ರಶ್ನೆ ಕೇಳ್ತಾ 'ಹಿಂದೆ ಬೇಕಾದಷ್ಟು ಸರ್ತಿ ಹಿಂಗ್ ಆಗೈತ್ರೀ, ನಾನೇ ಪೇಪರ್‌ನಾಗೆ ಓದೀನಿ...' ಅಂದಿದ್ದಕ್ಕೆ

'ಅಲ್ವೋ, ಪೇಪರ್‌ನಾಗೆ ಬಂದಿದ್ದೆಲ್ಲಾ ನಿಜಾ ಆಗಂಗಿದ್ರೆ ನಾನೂ-ನೀನು ಇಷ್ಟೊತ್ತಿಗೆ ಇಲ್ಲ್ಯಾಕಿರತಿದ್ವಿ...ಇಷ್ಟೊಂದು ಓದ್‌ತೀನಿ ಅಂತೀ, ಇನ್ನೂ ಹೈಸ್ಕೂಲ್ ಹುಡ್ರು ಮಾತಾಡ್ದಂಗ್ ಮಾತಾಡದ್ ಬಿಟ್ಟಿಲ್ಲಲ್ಲ ನೀನು...' ಎಂದೆ.


'ಸುಮ್ಕಿರ್ರಿ, ನಿಮಗೊತ್ತಾಗಂಗಿಲ್ಲ, ನಮ್ ಸಾಹೇಬ್ರೂ ಶಾನೇ ಮಾತಿಗೆ ತಪ್ಪದ ಮಗ...' ಎಂದೋನನ್ನ ಅಲ್ಲೇ ನಿಲ್ಲಿಸಿ...

'ಹಂಗಾದ್ರೆ, ಬೆಂಗಳೂರು ಪದ್ಮನಾಭನಗರಾನೇ ಧ್ವಂಸ ಮಾಡ್ತಾರೇ ಅನ್ನು!' ಎಂದಿದ್ದನ್ನ ಅವನು ಒಂಥರಾ ಅರ್ಥಾನೇ ಆಗದವರ ಹಾಗೆ ಕಣ್ ಪಿಳಿಪಿಳಿ ಮಾಡ್ತಾ ನೋಡೋದನ್ನ ನೋಡಿ ನನಗೋ ಒಳಗೊಳಗೇ ನಗುಬಂತು.

# posted by Satish : 3:01 pm
Comments:
ಹಿ ಹಿ ಹಿ,

ಅಕ್ರಮ ಕಟ್ಟಡ :ಓ

ಇದು ಕ್ರಮಬದ್ದವಾಗಿ ಸಂಗ್ರಹಿಸಿದ್ದು ಸಾಹೇಬ್ರ. ಇದನ್ನ ಯಾರಾರ ಒಡಿತರ, ತೆಗಿರಿ ಅತ್ತಾಗೆ.

ಇಂತಿ
ಭೂತ
 
ನಿಮಗ್ಗೊತ್ತಿಲ್ಲ ಭೂತರಾಯರೇ,

ಇತ್ತೀಚೆಗೆ ಬೇಕಾದಷ್ಟು ಆಕ್ರಮಣಗಳಾಗಿವೆ, ನೀವು ಮೋಷ್ಟ್‌ಲೀ ಅಮೇರಿಕನ್ ಭೂತವಿರಬಹುದು, ಪದ್ಮನಾಭನಗರದಲ್ಲಿನ ಆಗು-ಹೋಗುಗಳು ನಿಮಗೆ ಹೇಗೆ ಗೊತ್ತಾದೀತು! :-)
 
ಕಾಳೋತ್ತಮರೆ,

ನಾನು ಫ್ರೆಂಚ್ ಭೂತ.

ನಾನು ಹೇಳಬಯಸಿದ್ದೇನೆಂದರೆ, ಕ್ರಮಬದ್ಧವಾಗಿ ಸಂಗ್ರಹಿಸಿದ ಅಕ್ರಮಗಳು. ಇದರ ಮೇಲೆ ಆಕ್ರಮಣ ಮಾಡಲಾಗದು :)

ಇಂತಿ
ಭೂತ
 
ಕಾಲು ದಾದಾ,
ಅಂದಾಗೆ ಪದ್ಮನಾಭನಗರ ಧ್ವಂಸ ಹೆಂಗೆ ಆಯ್ತು??
ನಾನು ಬೆಂಗಳೂರಿಂದ ದೂರದಲ್ಲಿ ಇದೀನಿ..ಸ್ಪಲ್ಪ ಹೇಳಿ
 
ಚಾಮುಂಡೇಶ್ವರಿ ಚುನಾವಣೆ ಬಗ್ಗೆ ಕಾಳಣ್ಣ ಏನಾದರೂ ಹೇಳಿರಬಹುದು ಅಂತ ಬಂದ್ರೆ ಏನೂ ಇಲ್ಲವಲ್ಲಾ! :(
 
ಕಾಳೂ ಅವರೇ,
ನಿಮ್ಮ ಈ ಬರಹ ಓದಿ ಎಪ್ಪತೈದಕ್ಕೂ ಹೆಚ್ಚು ವಯಸ್ಸಾಗಿರುವ ನಮ್ಮ ಕುಟುಂಬದ ಹಿರಿಯರೊಬ್ಬರ ಮುಖ ಕಣ್ಮುಂದೆ ಬಂತು...
ಒಬ್ಬಂಟಿಯಾಗಿರುವ ಆಕೆ ತಮ್ಮ ಪತಿ ಇಪ್ಪತೈದು ವರುಷಗಳಿಗೂ
ಹಿಂದೆ ಪದ್ಮನಾಭನಗರದಲ್ಲಿ ಕಷ್ಟಪಟ್ಟು ಕೊಂಡ ಸೈಟು ಉಳಿಸಿಕೊಳ್ಳಲು ಪಾಡು ಪಡುತ್ತಿದ್ದಾರೆ ಸದ್ಯಕ್ಕೊಂದು ಪುಟ್ಟಮನೆ ಕಟ್ಟಿಸಲು ಈ ಇಳಿ ವಯಸ್ಸಲ್ಲಿ ಒಬ್ಬರೇ ಓಡಾಡುತ್ತಿದ್ದಾರೆ
ಈ ವಯಸ್ಸಲ್ಲಿ ಏನಿದು ಪಾಡು ಅಂತ ಕೇಳಿದ್ದಕ್ಕೆ ಅವರಿಗೆ ಉತ್ತರಿಸಲೂ ಭಯ!
ಒಳ್ಳೇ ಲೇಖನ ಧನ್ಯವಾದಗಳು
-ಮಾಲ
 
Post a Comment



<< Home

This page is powered by Blogger. Isn't yours?

Links
Archives