Saturday, December 09, 2006

ನೀತಿ-ಹೊಣೆ ಇವೆಲ್ಲಾ ಇದ್ದಿದ್ರೆ ರಾಜಕಾರಣಿಗಳ್ಯಾಕ್ ಆಗ್ತಿದ್ರು?

ಪ್ರಜಾವಾಣಿ: ಚಾಮುಂಡೇಶ್ವರಿ ಕ್ಷೇತ್ರದ ಚುನಾವಣೆಯ್ಲಲಿ ಜನತಾದಳ (ಎಸ್) ಅಭ್ಯರ್ಥಿಯು ಅನುಭವಿಸಿರುವ ಸೋಲಿನ ನೈತಿಕ ಹೊಣೆ ಹೊತ್ತು ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿಗಳು ರಾಜೀನಾಮೆ ನೀಡಬೇಕು ಎಂದು ವಿವಿಧ ಸಂಘಟನೆ, ರಾಜಕೀಯ ಪಕ್ಷಗಳು ಆಗ್ರಹಿಸಿವೆ.

ಮೈಗಂಟಿರೋ ಎಂತೆಂಥಾ ಸಗಣೀನೇ ಕೊಡಗಿಕೊಂಡೇಳೋ ಈ ರಾಜಕಾರಣಿಗಳಿಗೆ ಈ ಸೋಲು-ಗೆಲುವು ಅನ್ನೋದೆಲ್ಲಾ ಎಷ್ಟರ ಮಟ್ಟಿಂದು? ನೀತಿ ಅನ್ನೋದೇನಾದ್ರೂ ಇದ್ರೆ ನೈತಿಕತೆ ಇರುತ್ತೆ, ನೈತಿಕತೆ ಇದ್ದಮೇಲೂ ಹೊಣೆ ಅಥವಾ ಜವಾಬ್ದಾರಿ ಇರುತ್ತೇ ಅಂತಾ ಯಾರ್ ಗ್ಯಾರಂಟೀ ಕೊಡೋಕಾಗುತ್ತೆ?

ಅದ್ ಸರಿ, ಈ ಸೋಲಿಗೂ ಹಾಗೂ ಅಪ್ಪಾ-ಮಕ್ಳು ತಮ್ಮ-ತಮ್ಮ ಕೆಲ್ಸಕ್ಕೆ ರಾಜೀನಾಮೆ ಕೊಡಬೇಕು ಅನ್ನೋದು ಯಾವ ನ್ಯಾಯ. ಅವನು ಯಾವನೋ ಸೋತ, ಅದಕ್ಕ್ಯಾಕ್ ಇವರು ಸರ್ಕಾರ ಬದಲಾಯಿಸಬೇಕು ಅಂತೀನಿ.

ಮೊದ್ಲು ಈ ಕಾಲೆಳೆಯೋರಿಗೆ ನೀತಿ-ಹೊಣೆ ಅನ್ನೋದಿರಬೇಕು, ಏನೋ ಚಾಮುಂಡೇಶ್ವರಿ ದಯೆಯಿಂದ ಯಾರೋ ಸೋತ್ರು, ಯಾರೋ ಗೆದ್ರು ಅಂದಾಕ್ಷಣ ಅದನ್ನ ಇವರು ತಮ್ಮ ಬೇಳೆ ಕಾಳು ಬೇಯಿಸಿಕೊಳ್ಳೋದಕ್ಕೆ ಬಳಸ್ತಾರ್ ನೋಡಿ ಅದಕ್ಕೇನ್ ಅನ್ನೋಣ. ಹಂಗಂತ ಸಿದ್ದರಾಮಿ ಏನಾದ್ರೂ ಸೋತಿದ್ರೆ ಅದರ ಕಥೀನೇ ಬೇರೆ ಇರತಿತ್ತು. ಗೌಡರ ಪಾಳ್ಯ ಕುರುಬರನ್ನ ಜೀವಂತ ಮಸಾಲೆ ಹಾಕಿ ಬೇಯಿಸಿಕೊಂಡು ತಿಂದಿರೋದು.

ನಿಮಗನ್ಸಲ್ಲಾ, ನೀತಿ-ಹೊಣೆ ಇವೆಲ್ಲಾ ಇದ್ದಿದ್ರೆ, ರಾಜಕಾರಣಿಗಳ್ಯಾಕ್ ಆಗ್ತಿದ್ರು? ಅವ್ವಾ ಚಾಮುಂಡೇಶ್ವರಿ, ನೀ ದೊಡ್ಡೋಳ್ ತಾಯಿ!

# posted by Satish : 8:25 pm
Comments:
ಕಾಲು ದಾದಾ,

ಸರಿ ಕಣಣ್ಣ ನೀ ಹೇಳಿದ್ದು..
ಚುನಾವಣೆ ಅಂದಮೇಲೆ ಸೋಲೋದು-ಗೆಲ್ಲೋದು ಇದ್ದಿದ್ದೇ..ಹಂಗಂದು ರಾಜೀನಾಮೆ ಕೊಟ್ಟಬಿಡೋಕೆ ಆಗುತ್ತಾ..

ನೈತಿಕತೆ..ಹಂಗೆಂದರೇನು ಅಂತಾ ಮೊದಲು ನಮ್ಮ ಪುಡಾರಿಗಳಿಗೆ ಕೇಳಣ್ಣ.
 
ಶಿವಣ್ಣ,

ನೈತಿಕತೆ ಅನ್ನೋದು ಬಿಟ್ ಮ್ಯಾಲೇನೇ ರಾಜಕೀಯಕ್ಕೆ ಇಳಿಯೋ ಹಾಗೆ ಸರ್ಕಾರಿ ಅದೇಶ ಬಂದಿರೋದು ನನಗೆ ಇತ್ತೀಚೆಗಷ್ಟೇ ಗೊತ್ತಾಯ್ತು!
 
Post a Comment



<< Home

This page is powered by Blogger. Isn't yours?

Links
Archives