Wednesday, March 28, 2007

ನಮ್ ಹೈಕ್ಳು ಕೊನಿಗೂ ಓದೋ ಹಂಗ್ ಆತಲ್ಲಪ್ಪಾ ದೇವ್ರೇ!

ಇತ್ಲಾಗಿ ಶ್ರೀಲಂಕಾದಿಂದಲೂ, ಬಡ ಬಾಂಗ್ಲಾದಿಂದಲೂ ಅಬ್ಬರದಲ್ಲಿ ಹೊಡೆಸಿಕೊಂಡ ಭಾರತದ ತಂದ "ವೇಷ್ಟ್" ಇಂಡೀಸ್ ಇಂದ ಇನ್ನೂ ಬಂದಿಳಿತೋ ಇಲ್ಲೋ ನಂಜನ ಮಾರಿ ಬಿಸಿಲಾಗಿ ಬಸವಳಿದ ಬಸಳೇ ಸೊಪ್ಪಾದಂಗಾಗಿತ್ತು. ನಾನೂ ಮೇಷ್ಟ್ರು ಒಂದ್ ರೀತಿ ಶೋಕಾ ಕಾರಿಕೊಳ್ಳೋ ನಂಜನ ಮುಸುಡಿ ನೋಡಿ ಸಂತೈಸೋ ನೆಪದಲ್ಲಿ ಏನಾರ ಹೇಳಾನ ಅಂತ ಬಾಯ್ ತೆಗಿಯೋ ಹೊತ್ತಿಗೆ ನಂಜನೇ...

'ಸುಮ್ಕಿರ್ರಿ ಮತ್ತೆ! ನಮ್ ಕ್ರಿಕೆಟ್ ತಂಡಾನ ಹಳಿಯೋ ಮಾತೇನಾರಾ ಆಡಿದ್ರೆ ನಾನ್ ಸುಮ್ಕಿರಲ್ಲ ನೋಡ್ರಿ!' ಎಂದು ಅಬ್ಬರಿಸಿದಾಗ ನನಗೂ ಮೇಷ್ಟ್ರಿಗೂ ತಬ್ಬಿಬ್ಬಾಗಿಹೋಯಿತು.

ಮೇಷ್ಟ್ರು 'ಇರ್ಲಿ ಬಿಡೋ, ನಿನ್ ದುಕ್ಕಾನೇ ನಮ್ದು, ನಮಗೂ ಅರ್ಥ ಆಗ್ತತಿ, ನಾವೂ ನಿನ್ನಂಗೇ ಹೊಟ್ಟಿಗೆ ದ್ವಾಸೀ-ಇಡ್ಲೀ ತಿನ್ನೋರಲ್ಲೇನು?!' ಎಂದು ಸಮಾಧಾನ ಹೇಳಿದೊಡನೆ ನಂಜನ ಮುಖ ಮುನಿಯನ ಮಾದರಿ ಸಿನಿಮಾದ ಶಂಕರ್‌ನಾಗನ ಮುಖ ಹೋಲುವಂತಾಯಿತು.

ನಾನಿದ್ದೋನು 'ಪಾಪ, ನಮ್ಮೋರು ಬಾಳ್ ಕಷ್ಟ ಪಟ್ಟಿದ್ರು...ಚುಚು' ಎಂದು ಸುಳ್ಳು ಹೇಳಿದೆ.

ಮೇಷ್ಟ್ರು 'ಇಲ್ಲ ತಗಳ್ರಿ, ಈ ಭಂಡ್ ನನ್ ಮಕ್ಳು....' ಎಂದು ಮುಂದುವರೆಸುವಷ್ಟರಲ್ಲಿ ನಾನು 'ಮೇಷ್ಟ್ರೇ...' ಎಂದು ಸಂಜ್ಞೆ ಮಾಡಿದ್ದಕ್ಕೆ ಮೇಷ್ಟ್ರು ತಮ್ಮ ಮಾತಿನ್ ಧಾಟಿ ಬದಲಿಸಿ '...ಅವೇ, ಲಂಕೇಶನ ವಂಶಸ್ಥರು, ಅದೇನ್ ಆಟ ಆಡ್ತಾರೋ ಅಥವಾ ಮಸ್‌ಗಿರಿ ಮಾಡ್ತಾರೋ!' ಎಂದು ಉಸಿರು ಬಿಟ್ಟು ಸಂತೇ ಒಳಗೆ ಜಾರುತ್ತಿರುವ ತಮ್ಮ ಲಂಗೋಟಿಯನ್ನು ಉಳಿಸಿಕೊಂಡಷ್ಟು ನಿರುಮ್ಮಳವಾದರು.

'ನಮ್ ಶಾಲೆ ಹುಡುಗ್ರು ಮೇಲೆ ಯಾವ್ ರೀತಿ ಪ್ರಭಾವ ಬೀರ್ತೋ' ಎಂದೆ.

ಮೇಷ್ಟ್ರು 'ಪರೀಕ್ಷೆ ಹತ್ರ ಬಂತು, ಓದಿಕೊಳ್ರೋ ಅಂದ್ರೆ ಕ್ರಿಕೆಟ್ಟು ಮ್ಯಾಚು ಅಂತ ಟಿವಿ ಪರದೇ ನೋಡೋ ಹುಡ್ರು ಒಂದಿಷ್ಟು ಬುಕ್ಕಿನ ಮಾರಿ ನೋಡಂಗಾತು ನೋಡ್ರಿ!' ಎಂದು ತಾವೇ SSLC ಪರೀಕ್ಷೆ ಪಾಸಾದಷ್ಟು ಸಂತೋಷ ಪಟ್ಟರು!

ನಂಜನೂ ನಾನೂ ಮುಖ ಮುಖ ನೋಡಿಕೊಂಡೆವು.

# posted by Satish : 11:27 pm
Comments:
ಕಾಳಣ್ಣ,

ಹೂಂ ಕಣಣ್ಣಾ..ಹೈಕ್ಳು ಓದಂಗೆ ಆತು..
ಆದರೆ ಪಾಪ..ಅವ್ರು ಟಿವಿಯಾಗ ರೊಕ್ಕ ಸುರದು ಬೈಕ್ ತಗೋರಿ, ಮೊಬೈಲ್ ತಗೋರಿ, ಬಿಸ್ಕಿಟ್ ತಿನ್ನೀರಿ ಅಂತಾ ಹೇಳಿ ನಮ ಟೀಂ ಇಂಡೀಯಾಕ್ಕೆ ದುಡ್ಡು ಸುರಿದಿದವಲ್ವಾ ಅವುಗಳ ಗತಿ ಎನು ಕಾಳಣ್ಣ?
 
ಶಿವಣ್ಣಾ,

ಅವ್‌ಗಳ ಕಥೆ ದೇವ್ರೇ ಗತಿ!
ಅಂಥಾ ದೊಡ್ ದೊಡ್ಡ ಕಂಪನಿಗಳಿಗೆ ಗೆಲ್ಲೋ ಕುದುರೇ ಬಾಲಾ ಹಿಡೀ ಬೇಕು ಅನ್ನೋ ಕಾಮನ್‌ಸೆನ್ಸೂ ಇರಲ್ಲ ಅಂತಂದ್ರೆ ಹೆಂಗೆ?
 
Post a Comment



<< Home

This page is powered by Blogger. Isn't yours?

Links
Archives