ನಮ್ ಕರ್ನಾಟಕದ ಮಂದೀ ಅಂದ್ರ ಮಹಾ ನಾಟಕದ ಮಂದಿ ನೋಡ್ರಿ, ಅದಕಾ ಐವತ್ತು ವರ್ಷದ ಹಿಂದ 'ಕರ್ನಾಟಕ' ಅಂತ ಹೆಸರು ಇಟ್ಟಾರೇನೋ ಅಂತ ನನಗೂ ಎಷ್ಟೊ ಸರ್ತಿ ಅನುಮಾನ ಬಂದತಿ. ಇಲ್ಲಾ ಅಂದ್ರ ಇವ್ರು ಯಾಕ್ ಹಿಂಗ್ ಆಡತಿದ್ರೂ ಅಂತ ನೀವಾರ ಒಸಿ ಕೇಳ್ರಲ್ಲಾ. ರೆಡ್ಡಿ ಮೊದಲು ಸಿಡಿ ತೋರಿಸ್ತೀನಿ ಅಂತ ಮೂಗಿಗೆ ತುಪ್ಪಾ ಸವರಿ ತನ್ ಕೆಲ್ಸಾ ತಾನ್ ಸಾಧಿಸಿಕಂಡನೋ, ಈಗಂತು ನಾಚಿಗ್ಗೆಟ್ಟೊರ್ ಹಂಗ ಡೈರೆಕ್ಟಾಗಿ ಪತ್ರಿಕ್ ಗಳಿಗೇ ಸಿಡಿ ಹಂಚೋ ವ್ಯವಸ್ಥೆ ನಡದತೇತಂತೆ. ಸ್ವಲ್ಪನಾರೂ ಕಬರು ಅನ್ನದ್ ಬ್ಯಾಡಾ ಇವರಿಗೆ? ಅಲ್ಲಪಾ, ಅಕಸ್ಮಾತ್ ಅದರಾಗ್ ಇರೋದ್ ನಿಜಾನೆ ಅಂತ ಅಂದ್ಕೊಳನಾ, ಈ ಪತ್ರಿಕ್ ಗೊಳಿಗೆ ದಮ್ ಇರತೇತೇನೂ ಅದನ್ನ ಹೆಂಗೈತೆ ಹಂಗೆ ಪಬ್ಲಿಷ್ ಮಾಡಾಕೇ?
ಒಂಥರಾ ಬಾಳಾ ಕ್ರಿಯೇಟಿವ್ ಮಂದಿ ಇವ್ರು ಅನ್ನೋದೇನೋ ನಿಜಾ, ಯಾಕಂದ್ರ ಒಳ್ಳೇದೂ ಕೆಟ್ಟದ್ದು ಎಲ್ಲಾ ಕೂಡೇ ಮಿಕ್ಸ್ ಮಾಡಿ ವಿಡಿಯೋ ತೆಗೆದು ಅದರ ಸಂಭಾಷಣೇ ಸಾರಾನೂ ಬರೆದು ಕೊಟ್ಯಾರಂತ. ನನ್ ಕೇಳಿದ್ರೆ ನೋಡ್ರಿ ಇವರ್ನೆಲ್ಲಾ ಒಟ್ಟಿಗೇ ಸೇರ್ಸಿ ಜೈಲಿನ್ಯಾಗ್ ಕೂಡಬಕು, ಒಂಥರಾ ನಮ್ ಇಂದ್ರಾ ಗಾಂಧಿ ಕೂಡಿದ್ಲಲ್ಲ ೭೭ ರಾಗ, ಹಂಗ.
ದೊಡ್ಡಾ ಗೌಡ್ರು ಬಲಭೀಮನ್ ಥರಾ ಸಡ್ಡು ಹೊಡ್ದು ಹೇಳವ್ರಂತೆ 'ನನ್ ಮಗನ್ ಮುಟ್ಟೋಕ್ ಬಂದೋರ್ ಕಥಿ ಮುಟ್ಟುಸ್ ಬಿಡ್ತೀನಿ' ಅಂತ, ಇತ್ಲಾಗ ಕುಸಾ ಸಾಹೇಬ್ರೂ ಚಪಲ ಚೆನ್ನಿಗಪ್ಪನಿಗೆ 'ಅಯ್ಯೋ, ನಮ್ಮೋರೇ ಬಿಡು...' ಅಂತ ಅಭಯ ಕೊಟ್ಟೋರಂತೆ.
'ಒಂದಲ್ಲಾ, ಎರಡಲ್ಲಾ, ಮೂರಂತ್ರೀ...ಹೊರಗ್ ಬರೋ ಸಿಡಿಗಳು ಎಷ್ಟೇ ಬಂದ್ರೂ ನಮ್ಮನ್ನೇನೂ ಮಾಡಕ್ಕಾಗಲ್ಲ...' ಅಂತ ಯಾರೋ ನಕ್ಕಂಗ್ ಕೇಳ್ತು, ಕುಸಾ ನಮ್ಮನಿ ಒಳಗ ಯಾತಕ್ಕ್ ಬಂದಾರ ಅಂತ ಪೇಪರ್ ಸರಿಸಿ ನೋಡಿದ್ರ, ಅಲ್ಲಿ ಕಂಡೋನು ಇನ್ಯಾರೂ ಅಲ್ಲಾ ನಮ್ ಟೈಲರ್ ಬಾಬಣ್ಣ, ಇವನೊಳ್ಳೇ ಸಮಯಕ್ ಬಂದಾ ಅಂತ 'ಏ ಹೊಸ ಸಿಡಿ ವಿಷ್ಯಾ ನಿನಗೇನಾರಾ ಗೊತ್ತಾ?' ಅಂತ ಕೇಳಿದ್ದಕ್ಕೆ 'ಅಲ್ರೀ ಸವಕ್ಕಾರ್ರೇ, ಅವರಿಗ್ ಕೆಲಸಿಲ್ಲಾ ಅಂತ ನನಗೂ ಕೆಲ್ಸಿಲ್ಲಾ ಅಂತ ತಿಳಕಂಡೀರೇನೂ?' ಅಂತ ನನ್ನೇ ಪ್ರಶ್ನೇ ಕೇಳೋದೇ!
'ಸರಿ ಹೋಯ್ತು, ಹೊಸ ವಿಷ್ಯಾ ತಿಳಕಂಬಕು, ಅದರಾಗೇನ್ ತಪ್ಪು?' ಅಂತ ಸ್ವಲ್ಪ ಗಟ್ಟಿಯಾಗ್ ಕೇಳಿದ್ದಕ್ಕೆ 'ಏ, ನಿಮಗ್ಗೊತ್ತಾಗಂಗಿಲ್ಲ ಬಿಡ್ರಿ' ಅಂತಾ ಅಂದು ಹಿಂತಿರುಗೂ ನೋಡ್ದೇ ಹೋಗೇ ಬಿಟ್ಟ.
# posted by Satish : 12:03 pm